ಕಳ್ಳಿ ಪೀರ'' ( -)ವನ್ನು ಸಂಸ್ಕೃತದಲ್ಲಿ "ಸಾರಂಗ" ತುಳು ಬಾಷೆಯಲ್ಲಿ "ತುಂಬೆ ಪಕ್ಕಿ" ಮುಂತಾಗಿ ಕರೆಯುತ್ತಾರೆ.ಗುಬ್ಬಚ್ಚಿಗಿಂತ ದೊಡ್ಡದು.ಹಸಿರು ಬಣ್ಣ. ಆಕಾಶದಲ್ಲಿ ಹಾರುವಾಗ ಜೇನು ಹುಳವನ್ನು ಹಿಡಿದು ತಿನ್ನುತ್ತದೆ.ಆಫ್ರಿಕದ ಉತ್ತರ ಭಾಗ,ಪಶ್ಚಿಮ ಅರೇಬಿಯಾ,ಭಾರತದಿಂದ ವಿಯೆಟ್ನಾಮ್ ವರೆಗಿನ ಏಷಿಯಾದ ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. === ವೈಜ್ಞಾನಿಕ ಹೆಸರು === ಇದು ಮೀರಾಪಿಡೇ ಕುಟುಂಬಕ್ಕೆ ಸೇರಿದೆ. ಮೀರಾಪ್ಸ್ ಓರಿಯಂಟಾಲಿಸ್ ಎಂದು ಅಧಿಕೃತ ಹೆಸರು. === ಲಕ್ಷಣಗಳು === ಗೊರವಂಕ ಹಕ್ಕಿಗಿಂತ ಚಿಕ್ಕದು.ಮೈ ಹಸಿರು ಬಣ್ಣ ಹಾಗೂ ನೆತ್ತಿ ಕಂದು ಬಣ್ಣ.ಮೊನಚಾದ ಬಾಗಿದ ಕೊಕ್ಕು.ಬಾಲದ ಮದ್ಯದಿಂದ ಸೂಜಿಯಂತೆ ನೀಳವಾದ ಗರಿಗಳಿರುತ್ತವೆ. === ಆಹಾರ ಹಾಗೂ ಆವಾಸ === ಜೇನು ನೊಣ,ಸಣ್ಣ ಹುಳ ಹುಪ್ಪಟೆಗಳು,ಇರುವೆಗಳು ಮುಖ್ಯ ಆಹಾರ.ಜನವಸತಿ ಇರುವೆಡೆ ತಂತಿ ಇತ್ಯಾದಿ ಎತ್ತರದ ಪ್ರದೇಶದಲ್ಲಿ ಕುಳಿತುಕೊಳ್ಳುತ್ತದೆ. ಬಿಲಗಳಲ್ಲಿ ಗೂಡು. === ಬಾಹ್ಯ ಸಂಪರ್ಕ === 2016-03-03 ವೇಬ್ಯಾಕ್ ಮೆಷಿನ್ ನಲ್ಲಿ. === ಆಧಾರ === ೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್